‘ಕ್ರೇಜಿ ಬಾಯ್’ ಇಂದಿನಿ೦ದ ಬಿಡುಗಡೆ
Posted date: 19 Fri, Aug 2016 – 09:36:54 AM

ಈಗಾಗಲೇ ಹಾಡುಗಳಿಂದ ಹಾಗೂ ಟ್ರೈಲರ್ ಇಂದ ಮನಸೂರೆಗೊಂಡಿರುವ ಕ್ರೇಜಿ ಬಾಯ್ ಚಿತ್ರ ಯುವ ಪೀಳಿಗೆಯ ನಟರುಗಳಾದ ದಿಲೀಪ್ ಪ್ರಕಾಶ್ ಹಾಗೂ ಆಶಿಕ ಅಭಿನಯದ ಹೆಸರಾಂತ ನಿರ್ದೇಶಕ ಮಹೇಶ್ ಬಾಬು ಅವರ ಚಿತ್ರ ಇಂದಿನಿ೦ದ  ಬಿಡುಗಡೆ  ಆಗಲು ಸಿದ್ದವಾಗಿದೆ.

ಹೆಸರಾಂತ ಸಿನಿಮಗಳಾದ ಆಕಾಶ್, ಅರಸು, ಅಭಯ್, ಅಜಿತ್, ಚಿರು, ಮೆರವಣಿಗೆ, ಪರಮೇಷಿ ಪಾನವಾಲ’,ಪ್ರೇಮ್ ಅಡ್ಡಹಾಗೂ ಇನ್ನಿತರ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಅವರ ಕ್ರೇಜಿ ಬಾಯ್’  ಡಿ. ಪಿ ಎ ಫಿಲ್ಮ್ಸ್ ಅಡಿಯಲ್ಲಿ  ಚಂದ್ರು ಗೋವಿಂದರಾಜ್ ಈ ಚಿತ್ರದ ನಿರ್ಮಾಪಕರು. ಶೇಖರ್ ಚಂದ್ರ ಅವರ ಛಾಯಾಗ್ರಹಣ, ಜಸ್ಸಿ ಗಿಫ್ಟ್ ಅವರ ಸಂಗೀತ ಇರುವ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಅಜಯ್ ಕುಮಾರ್ ಅವರು ನೀಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನಕಾರರು.

ಪೋಷಕ ಕಲಾವಿದರಲ್ಲಿ ಪ್ರಕಾಷ್ ರಾಜ್, ರವಿಶಂಕರ್, ರಂಗಾಯಣ ರಘು, ಸಾಧು ಕೋಕಿಲ ಹಾಗೂ ಇತರರು ಇದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed